ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನೇತ್ರಾವತಿ-ಕುಮಾರಧಾರ ನದಿಯ ಸಂಗಮ ಕ್ಷೇತ್ರವಾಗಿದೆ. ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಗ್ರಾಮ ಪಂಚಾಯತ್ ಒಂದು ಕಂದಾಯ ಗ್ರಾಮವನ್ನು ಒಳಗೊಂಡಿರುತ್ತದೆ. ಆರು ವಾರ್ಡ್ಗಳನ್ನು ಒಳಗೊಂಡಿದ್ದು 2011 ರ ಜನಗಣತಿಯ ಪ್ರಕಾರ 3901 ಪುರುಷರು ಹಾಗೂ 3912 ಮಹಿಳೆಯರಂತರೆ ಒಟ್ಟು 7813 ಜನಸಂಖ್ಯೆಯನ್ನು ಹೊಂದಿದ್ದು, ಒಟ್ಟು 1544 ಕುಟುಂಬಗಳಿರುತ್ತದೆ. ನೆಟ್ಟಿಬೈಲು, ಕಜೆಕ್ಕಾರು ಕೊಪ್ಪಳ ಸೇರಿದಂತೆ ಉಪ್ಪಿನಂಗಡಿ ಗ್ರಾಮದಲ್ಲಿ ಒಟ್ಟ್ಟು 502 ಎಸ್ ಸಿ ಹಾಗೂ 94 ಎಸ್ ಟಿ ಜನಸಂಖ್ಯೆ ಇರುತ್ತದೆ. ಒಟ್ಟು 6 ವಾರ್ಡ್ಗಳಿದ್ದು ಒಟ್ಟು 20 ಸದಸ್ಯಬಲವಿರುತ್ತದೆ. ಉಪ್ಪಿನಂಗಡಿ ಗ್ರಾಮವು ಪುತ್ತೂರು ತಾಲೂಕು ಪಂಚಾಯತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಳಪಟ್ಟಿರುತ್ತದೆ. ನೆಟ್ಟಿಬೈಲು, ಕಜೆಕ್ಕಾರು ಕೊಪ್ಪಳ ಸೇರಿದಂತೆ ಉಪ್ಪಿನಂಗಡಿ ಗ್ರಾಮದಲ್ಲಿ ಒಟ್ಟ್ಟು 502 ಎಸ್ ಸಿ ಹಾಗೂ 94 ಎಸ್ ಟಿ ಜನಸಂಖ್ಯೆ ಇರುತ್ತದೆ.
ಉಪ್ಪಿನಂಗಡಿ ಗ್ರಾಮದಲ್ಲಿ 4 ದೇವಸ್ಥಾನ, 3 ಮಸೀದಿ, 1 ಚರ್ಚ್, 6 ಮದ್ರಸ, 2 ಭಜನಾ ಮಂದಿರಗಳಿವೆ. ಉಪ್ಪಿನಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ 1 ಪ್ರಾಥಮಿಕ ಆರೋಗ್ಯ ಕೇಂದ್ರ, 9 ಶಾಲೆ, 2 ಕಾಲೇಜು, 10 ಅಂಗನವಾಡಿ ಕೇಂದ್ರಗಳಿವೆ. ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು, ಸ್ತೀಶಕ್ತಿ ಸಂಘಗಳು, ನಮೋದಯ ಸಂಘ, ಎನ್.ಆರ್,ಎಲ್,ಎಂ ಸಂಘಗಳು, ಜೆಸಿಐ, ರೋಟರಿ ಕ್ಲಬ್, 8 ಆಶಾ ಕಾರ್ಯಕರ್ತೆಯರು, 2 ನ್ಯಾಯಬೆಲೆ ಅಂಗಡಿ, ಪ್ರಾಥಮಿಕ ಕೃಷಿ ಪತ್ತಿನ ಸ್ವಸಹಾಯ ಸಂಘ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಈ ಹಿಂದೆ ತಾಲೂಕು ಕೇಂದ್ರವಾಗಿದ್ದು, ಮಳೆಗಾಲದಲ್ಲಿ ನದಿ ನೀರಿನ ಪ್ರವಾಹದ ಸಮಸ್ಯೆಯಿಂದಾಗಿ ತಾಲೂಕು ಕೇಂದ್ರ ಪುತ್ತೂರಿಗೆ ಸ್ಥಳಾಂತರಗೊಂಡಿರುತ್ತದೆ. ಆದರೂ ಪುತ್ತೂರು ತಾಲೂಕಿನಲ್ಲಿ ಪುತ್ತೂರು ಹೊರತುಪಡಿಸಿದರೆ ಉಪ್ಪಿನಂಗಡಿಯೇ ಅತೀ ದೊಡ್ಡ ಪೇಟೆ ಪ್ರದೇಶವಾಗಿರುತ್ತದೆ. ಪುತ್ತೂರು ತಾಲೂಕಿನ ಶಿರಾಡಿಯಿಂದ ಕೋಡಿಂಬಾಡಿವರೆಗಿನ ಮತ್ತು ರಾಮಕುಂಜ, ಆಲಂಕಾರುವರೆಗೆ, ಬಂಟ್ವಾಳ ತಾಲೂಕಿನ ಬಿಳಿಯೂರು ಪೆರ್ನೆವರೆಗೆ ಮತ್ತು ಬೆಳ್ತಂಗಡಿ ತಾಲೂಕಿನ 6 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಜನರಿಗೆ ಉಪ್ಪಿನಂಗಡಿಯೇ ಪ್ರಮಖ ವ್ಯವಹಾರ ಸ್ಥಳವಾಗಿರುತ್ತದೆ. ಹಾಗೂ ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿ ಮೂಲಕ ಹಾದು ಹೋಗುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಉಪ್ಪಿನಂಗಡಿ ಬೆಳೆಯುತ್ತಿರುವ ವ್ಯವಹಾರ ಕೇಂದ್ರವಾಗಿರುತ್ತದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ನ ಸ್ವಂತ ಅನುದಾನವು ಮನೆ ತೆರಿಗೆ ಮಾತ್ರವಲ್ಲದೆ ಪೇಟೆಯ ಸುಮಾರು 700 ಅಂಗಡಿಗಳ ವ್ಯಾಪಾರ ಪರವಾನಿಗೆ ಹಾಗೂ ಪಂಚಾಯತ್ ಕಟ್ಟಡಗಳ ಬಾಡಿಗೆಯಿಂದ ಬರುವ ಆದಾಯವನ್ನು ಒಳಗೊಂಡಿರುತ್ತದೆ.